ಆಟ್‍ವುಡ್, ಜಾರ್ಜ್ 
(1746-1807). ಇಂಗ್ಲೆಂಡಿನ ಗಣಿತಶಾಸ್ತ್ರಜ್ಞ. ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿನ ಪಂಡಿತಸದಸ್ಯ ಹಾಗೂ ಉಪಾಧ್ಯಾಯ. ಎಫ್.ಆರ್.ಎಸ್. ಗೌರವವನ್ನು ಪಡೆದವ. ವಸ್ತುಗಳು ಮೇಲಿಂದ ಕೆಳಗೆಬೀಳುವ ಸಂಬಂಧದಲ್ಲಿನ ನಿಯಮಗಳನ್ನು ತಾಳೆಮಾಡಲು ಬಳಸುವ ಯಂತ್ರಕ್ಕೆ ಇವನ ಹೆಸರನ್ನೇ ಇಡಲಾಗಿದೆ. ಇವನ್ನು ಟ್ರೀಟಿಸ್ ಆನ್ ದಿ ರೆಕ್ಟಿಲೀನಿಯರ್ ಮೋಷನ್ ಅಂಡ್ ರೊಟೇಷನ್ ಆಫ್ ಬಾಡೀಸ್ (1784) ಎಂಬ ಇವನ ಗ್ರಂಥದಲ್ಲಿ ವಿವೇಚಿಸಲಾಗಿದೆ.						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ